skip to main | skip to sidebar

About me

My Photo
Amritha
View my complete profile

Archivo del blog

  • ▼ 2010 (2)
    • ▼ February (2)
      • ಹೊಸ ಟೈಮ್ ಪಾಸು -ಫಾರ್ಮವಿಲ್ಲೇ
      • ಚಿಕಾಗೋದಿಂದ ಬರೋವಾಗ .....
  • ► 2009 (2)
    • ► October (1)
    • ► August (1)

Followers

Powered By Blogger

ಸುಮ್ಮನೇ..... ಟೈಂಪಾಸ್ ... :)

ಹೊಸ ಟೈಮ್ ಪಾಸು -ಫಾರ್ಮವಿಲ್ಲೇ

Thursday, February 25, 2010

ಏನು ಕೆಲಸ ಇಲ್ಲ .. ಏನು ಮಾಡಲು ಮೂಡ ಇಲ್ಲ ಎನ್ನುತ್ತಾ ಕುಳಿತಿದ್ದ ನನಗೆ, ಫೇಸ್ ಬುಕ್, ಫಾರ್ಮ್ ವಿಲ್ಲೆಯಾ ರೂಪದಲ್ಲಿ ನನಗೆ "ಮಣ್ಣಿನ ಮಗಳು " ಆಗೋ ಅವಕಾಶ್ ಒದಗಿಸಿ ಕೊಟ್ಟು,ಹೊಸ "ಫೇಸ್" ಅನ್ನು ತಂದು ಕೊಟ್ಟಿದೆ. ದುಡ್ಡು ,ಕಾಸು ಕೊಡದೆ ಡೈರೆಕ್ಟ್ ಆಗಿ 4 ಗದ್ದೆ(ಹೊಲ) ಕೊಟ್ಟು ,ಹಾರೆ ಪಿಕ್ಕಾಸು ಕೊಟ್ಟೂ .. ಕೋಳಿ ,ಕುರಿ, ದನ ಸಾಕೋ ಯೋಗ ಒದಗಿಸಿದೆ . ಅದಿಕ್ಕೆ ನಾನು ಫೇಸ್ ಬುಕ್ ಗೆ ತುಂಬಾ ಆಭಾರಿ ಆಗಿದ್ದೇನೆ.
ಈಗ ದಿನವೆಲ್ಲ ನನಗೆ ನಂ ಗದ್ದೆಗಳದ್ದೆ ಯೋಚನೆ .. ಊಟ ,ತಿಂಡಿ ನಿದ್ದೆ ಗಿಂತ ಮೊದಲು ನನಗೆ ನಂ ಬೆಳೆಗಳನ್ನು ನೋಡೋದೇ ಒಂದು ಆನಂದ.ಕೈಯಾರೆ ಬೆಳೆದ soya beans ,ಗುಲಾಬಿಗಳು ,ಬದನೆ ಕಾಯಿ,ದ್ರಾಕ್ಷಿ ಇತ್ಯಾದಿಗಳನ್ನು ತೆಗೆದು ಮಾರ್ಕೆಟ್ ನಲ್ಲಿ ಮಾರೋವಾಗ ತುಂಬಾ ಖುಷಿ ಆಗುತ್ತದೆ. ಜೊತೇಲಿ ಸಮಾಜ ಸೇವೇನು ಮಾಡ್ತೀನಿ . ಪಕ್ಕದ ಗದ್ದೆಯಲ್ಲಿ ಎಲ್ಲ ಸರಿಯಾಗಿ ನಡೀತಾ ಉಂಟೋ .. ಇಲ್ವೋ ಎಲ್ಲ ನೋಡ್ಕೊಂಡು ಬರ್ತೀನಿ . ಕಾಗೆ ,ನರಿಗಳು ಉಪದ್ರ ಕೊಡ್ತಿದ್ರೆ ಓಡಿಸಿ ಉಪಕಾರ ಮಾಡ್ತೀನಿ . ಅಗೆ(plowed land) ಆಗಿದ್ರೆ furtilizer ಹಾಕಿ ಬರ್ತೀನಿ ,ಕೋಳಿಗಳಿಗೆ ಕಾಳು ಹಾಕಿ ಬರ್ತೀನಿ !! ಅದಿಕ್ಕೆಲ್ಲಾ ಒಂದು ಚೂರು ಪಾರು ದುಡ್ಡು ಸಿಗುತ್ತೆ ಅಂತ ಹೇಳೋಣ..ಆದ್ರೆ ಜುಜುಬಿ 5,10 ಇಟ್ಕೊಂಡು ನಾನೇನು ಮಾಡಲಿ ? ಸಮಾಜ ಸೇವೆನೆ ಮುಖ್ಯ ಅಲ್ವಾ .. ನಂ ಫ್ರೆಂಡ್ಸ್ ಗಳಿಗೆ ಒಳ್ಳೆ ಬೆಳೆ ಬಂದ್ರೆ ,ಉಪಕಾರ ಮಾಡಿದಕ್ಕೆ ಒಂದು ಸಣ್ಣ ಗಿಫ್ಟ್ ಕೊಟ್ಟು ನೆನಪಲ್ಲಿ ಇಟ್ಕೊತರಲ್ಲ ಅಂತ ಅಷ್ಟೇ(ಕೊಡಲಿಲ್ಲ ಅಂದ್ರೆ ಕೇಳಿ ತೊಗೋತೀನಿ ಕೆಲವೊಮ್ಮೆ!!). ನನ್ನ ಗಂಡನಿಗೆ ಅಂತು ನನ್ನ ಗದ್ದೆ ತೋರಿಸಿ, ಹೊಟ್ಟೆ ಕಿಚ್ಚು ತಂದು, ಅವರು ಒಂದು ಗದ್ದೆ ತೊಗೋ ಹಾಗೆ ಆಯಿತು !! ಆದ್ರೆ ತುಂಬಾ ಬ್ಯುಸಿ ಅಂತ ಅವರ ಗದ್ದೆ ಕೆಲ್ಸನು ನಂಗೆ ಕೊಟ್ಟಿದ್ದಾರೆ !! ನಾನು ಅವರ ಹಾಫ್ -ಶರ್ಟ್(ಅರ್ಧಾಂಗಿ ) ಅಲ್ವಾ ಅದಿಕ್ಕೆ. ಹೇಳಿ ಬಿಟ್ಟಿದ್ದೀನಿ... ಎರೆಡೆರಡು ಗದ್ದೆಲಿ ಕೆಲಸ ಮಾಡಿ ಸಕತ್ತು experience ಸಿಕ್ಕಿದೆ ನಂಗೆ ,ಈ ಕಂಪ್ಯೂಟರ್ ನ ಗದ್ದೆಲಿ ನಿಂಗೆ ಹೆಲ್ಪ್ ಮಾಡಿರೋದಕ್ಕೆ ಪ್ರತಿಫಲವಾಗಿ, ನಿಜವಾಗಿ 1 ಅಕ್ರೆ ಜಾಗ,4 ದನ ಕೊಡ್ಸು ಅಂತ .. ಅಲ್ಲೇ ಒಂದು ಚಂದದ ಮನೆ ಮಾಡಿಕೊಂಡು ,ನಂದೇ ತೋಟದಲ್ಲಿ ಬೆಳೆದ ತರಕಾರಿ ತೆಗದು ಅಡುಗೆ ಮಾಡಬೇಕು ಅಂತ ಆಸೆ.ಕೋಳಿ ತಿನ್ನೋರಿಗೆ ಬೇಕಿದ್ರೆ ನಮ್ಮದೇ ಫಾರ್ಮ್ ನ ಕೋಳಿ ಸುಕ್ಕ ಮಾಡಿ ಕೊಡೋಣ... ಇದೆಲ್ಲ ಯಾವಾಗ ಸಾಧ್ಯನೋ ಗೊತ್ತಿಲ್ಲ. ಆದರು ಹೊಸ ದಿಕ್ಕಿನಲ್ಲಿ ಕನಸು ಕಾಣೋದನ್ನ ಕಲಿಸಿ ಕೊಟ್ಟು ,ಡೈಲಿ routine ನಲ್ಲಿ ಹೊಸ ಟೈಮ್ ಪಾಸು ಕೊಟ್ಟು ,ಹೊಸ ಉತ್ಸಾಹ ತಂದುಕೊಟ್ಟ , "farm ville" ಗೆ ಧನ್ಯವಾದಗಳು .

Posted by Amritha at 10:18 AM 4 comments  

ಚಿಕಾಗೋದಿಂದ ಬರೋವಾಗ .....

Thursday, February 4, 2010

ಇಂಜಿನಿಯರಿಂಗ್ ಫೈನಲ್ ಇಯರ್ ನಿಂದ ಯಂಡಮೂರಿ ವಿರೇಂದ್ರನಾಥ್ ಅವರ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕವನ್ನು ಓದುತ್ತಿದ್ದೆ.. ಆದರೆ ಅದು ನನ್ನ ಮೇಲೆ ಪ್ರಭಾವ ಬೀರುತ್ತಿದೆಯೇ ? ಇಲ್ಲವೇ ಗೊತ್ತಾಗುತ್ತಿರಲಿಲ್ಲ... ಕೆಲಸಕ್ಕೆ ಸೇರಿದ ಮೇಲೆ ಓದಲು ಸಮಯ ಇರಲಿಲ್ಲ,ಯೋಚಿಸಲು ಮೊದಲೇ ಸಮಯವಿರಲಿಲ್ಲ.ಕೆಲಸ ಬಿಟ್ಟು,ಫ್ಯಾಮಿಲಿ ಅಂತ ಅಮೆರಿಕ ಗೆ ಬಂದ ಮೇಲೆ ತುಂಬಾ ಸಮಯ ದೊರಕಿದೆ.ಹಾಗಾಗಿ ಈ ಬಾರಿ ಭಾರತ ದಿಂದ ಬರುತ್ತಾ ನನ್ನ ಪುಸ್ತಕವನ್ನು ತೊಗೊಂಡು ಬಂದೆ. ಹೇಗೂ ತಂದಿದ್ದೆನಲ್ಲ ಎಂದು ಲಂಡನ್ ನಿಂದ ಚಿಕಾಗೋ ವರೆಗಿನ ವಿಮಾನದಲ್ಲಿ ಓದುತ್ತ ಬಂದೆ... ಓದಿದ ತಕ್ಷಣ ಅದು ನನ್ನ ಮೇಲೆ ಪ್ರಭಾವಬೀರಿದೆ ಅಂತ ತಿಳಿದುಕೊಳ್ಳುವ ಸನ್ನಿವೇಶ ಚಿಕಾಗೋ ವಿಮಾನ ನಿಲ್ದಾಣದಲ್ಲಿ ಏರ್ಪಟ್ಟಿತು.

ಲಂಡನ್ನಿಂದ ಬರುವ ವಿಮಾನ ತಡವಾಗಿ ಬಂದಿದ್ದ ಕಾರಣ ನಂಗೆ ಅಲ್ಲಿಂದ ನನ್ನ ಸಿಟಿಗೆ ಹೋಗುವ ವಿಮಾನ ಸಿಗಲಿಲ್ಲ(ಕಾನ್ನೆಕ್ಟಿಂಗ್ ಫ್ಲೈಟ್ "). ವಿಚಾರಿಸಿದರೆ ಈ ಸಂಜೆಯ ವಿಮಾನ ಬಿಟ್ಟರೆ ನಾಳೆ ಬೆಳಿಗ್ಗೆನೆ ಇರುವುದು ಎಂದು ಹೇಳಿ ಬೋರ್ಡಿಂಗ್ ಪಾಸು ಕೈಗೆ ಕೊಟ್ಟು,ನಾಳೆ ಬಾ ಎಂದರು!! ಏನಿದು ಹೊಸ ವಿಷಯವಲ್ಲ.. ಲಕ್ಷ ಗಟ್ಟಲೆ ಜನ ಸಂಚರಿಸುತ್ತಾರೆ,ಇಂಥದ್ದೆಲ್ಲ ಮಾಮೂಲು ಎಂದು ನೀವು ಅಂದು ಕೊಂಡರೂ, ನನಗೆ ಇಂಥ ಸನ್ನಿವೇಶ ಮೊದಲ ಬಾರಿ ಎದುರಾಗಿದ್ದು ,ಒಬ್ಬಳೇ ಸಂಚರಿಸುವಾಗ,ಅದೂ ೨ ದೊಡ್ಡ ೨೩ ಕೆ.ಜಿ ತೂಕದ ಬ್ಯಾಗ್ ಗಳನ್ನು ಹಿಡಿದುಕೊಂಡು,ದೊಡ್ಡ ಸಮಸ್ಯೆ ಎಂದು ಕಾಣಿಸಿತು.ಗಂಡನಿಗೆ ಫೋನ್ ಮಾಡಿದರೆ ಲೈನ್ ಸಿಗುತ್ತಿಲ್ಲ...ನನ್ನ ಪರಿಸ್ಥಿತಿ ನೋಡಿ ಜೋರಾಗಿ ಅಳಬೇಕು ಅನ್ನಿಸಿತು.ಅಷ್ಟರಲ್ಲಿ ನನಗೆ ನಾನು ಓದಿದ ಕೊನೆಯ ವಾಕ್ಯ ನೆನಪಾಯಿತು. ಅದು ಹೀಗಿದೆ "ಸಮಸ್ಯೆಯಾ ವಯಸ್ಸು ಕಡಿಮೆ.ಪ್ರತಿ ಸಮಸ್ಯಯಿಂದಲೂ ಒಂದು ಲಾಭವಿದೆ.ನಮಗೆ ಆಪ್ತರದವರಿಗೆ ಹಾರ್ಟ್ ಅಟ್ಯಾಕ್ ಆದರೆ ಆ ಅನುಭವದಿಂದ ನಾವು ಅಂಬುಲೆನ್ಸ್ ನಾ ಹೇಗೆ ಕರೆಯಬೇಕು,Emergency ವಾರ್ಡ್ನಲ್ಲಿ ರೋಗಿ ಯನ್ನು ಹೇಗೆ ಅಡ್ಮಿಟ್ ಮಾಡಬೇಕು ಎನ್ನುವ ವಿಷಯ ತಿಳಿಯುತ್ತವೆ". ಇವಿಷ್ಟು ನನಗೆ ನೆನಪದೊಡನೆ ನನ್ನ ಟೆನ್ಶನ್ ಕಮ್ಮಿಆಯಿತು. ನನ್ನದು ಇಷ್ಟು ದೊಡ್ಡ ಸಮಸ್ಯೆ ಅಲ್ಲ. ವಿಮಾನ ವಿಳಂಬವಾದರೆ ಏನು ಮಾಡಬೇಕು ಅನ್ನುವುದು ತಿಳಿದಿದೆ,ಆದರೆ ಕೇಳಲು ಭಯ.ಸರಿ ಇವತ್ತು ಈ ಭಯವನ್ನು ನಿವಾರಿಸಿಕೊಳ್ಳಲು ಅವಕಾಶ ಸಿಕ್ಕಿದೆ.ಏನಾಗುತ್ತೆ ನೋಡೋಣ ಅಂತ ಜೋರಾಗಿ ಉಸಿರೆಳೆದು ಕೊಂಡು, ಮತ್ತೆ ಮುಂದಿನ ವಿಮಾನದ ಟಿಕೆಟಿಂಗ್ ಕೌಂಟರ್ ಬಳಿ ಹೋದೆ. ೨೪ ಗಂಟೆ ಮುಂಚೆ ಬ್ಯಾಗ್ಯೆಜ್ ಚೆಕ್-ಇನ್ ಮಾಡಬಹುದಲ್ಲ,ಇವತ್ತು ಮಾಡಬಹುದೇ ಎಂದು ಕೇಳಿದೆ.ಸರಿ ಮಾಡೋಣ ಅಂತ ಅವ್ನು ಮಾಡಿಸಿಯೇ ಬಿಟ್ಟ!! ಅಬ್ಬ ಮಾತನಾಡಿದರೆ ಎಷ್ಟು ಸುಲಭ !! ಹ್ಯಾಂಡ್ ಬ್ಯಾಗ ಒಂದೇ ಹಿಡಿದುಕೊಂಡು ಏರ್ಪೋರ್ಟ್ ಸುತ್ತ ಬಹುದು.. ನಾನು ಕೇಳಿಲ್ಲ ಅಂದರೆ ಎಲ್ಲ ಹೊತ್ತುಕೊಂಡು ಹೋಗಬೇಕಿತ್ತಲ್ಲ ಅಂತ ಒಂದು ಸಮಸ್ಯೆಯನ್ನು ಗೆದ್ದ ಖುಷಿ ನನಗಾಯಿತು.ಮುಂದೆ, ಇರಲು ಒಂದು ಜಾಗ ಬೇಕು.. ಏರ್ಪೋರ್ಟ್ ನಲ್ಲಿ ಸುಮ್ಮನೆ ಕೂತಿರಲಿ? ಅಥವಾ ಹೋಟೆಲ್ ಗೆ ಹೋಗಿ ನಿಲ್ಲಲಿ ? ಯೋಚಿಸುತ್ತ information ಡೆಸ್ಕ್ ಹತ್ತಿರ ಹೋಗಿ,ಅವರಿಗೆ ನನ್ನ ಕಥೆ ಹೇಳಿ,ಹತ್ತಿರ ಇರಲು ಹೋಟೆಲ್ ಇದೆಯೇ ಎಂದು ಕೇಳಿದೆ.ಅದಿಕ್ಕೆ ಅವರು ವಿಳಂಬಮಾಡಿದ ಏರ್ ಲೈನ್ ನಾ ಕೇಳಿ ನಿಮಗೆ ಅವರು accommodation ಕೊಡಬಹುದು ಎಂದರು. ಒಹ್... ಇದು ನನಿಗೆ ಗೊತ್ತೇ ಇರಲಿಲ್ಲ.. ಕೊಟ್ಟರೆ ಆರಾಮಾಗಿ ಇರಬಹುದಲ್ಲ ಅಂತ ಅವರ ಟಿಕೆಟಿಂಗ್ ಕೌಂಟರ್ ಹುಡುಕಾಡಿ ಹೊರಟೆ.ಜೊತೆಯಲ್ಲೇ ಇನ್ನೊಂದು ಸಮಸ್ಯೆ..ಅವರು ಹೋಟೆಲ್ ನಲ್ಲಿ ರೂಂ ಕೊಟ್ಟರೂ,ಇಲ್ಲಿ ತನಕ ಒಬ್ಬಳೇ ಹೋಗಿ ಉಳಿದ್ದಿದ್ದಿಲ್ಲ ,ಏರ್ಪೋರ್ಟ್ ಗೆ ಹತ್ತಿರ ಇಲ್ಲ ಅಂದರೆ ವಾಪಸು ಬರುವುದು ಹೇಗೆ? ಹೇಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಿ ಅಂತ ಚಿಂತೆ ಆಯಿತು.ನನ್ನ ಪುಣ್ಯ ಅವರು ತಮ್ಮ ತಪ್ಪು ಒಪ್ಪಿಕೊಂಡು ನನಗೆ ರೂಂ ಮತ್ತು ಡಿನ್ನರ್ ಗೆ ವೌಚೆರ್ ಕೊಟ್ಟರು.ನನ್ನ ಸಮಸ್ಯೆ ಯನ್ನು ಅವರ ಮುಂದೆ ಇಟ್ಟೆ.ಹೇಗೆ ಹೋಗುವುದು ,ಬರುವದು ಹೇಗೆ ಅಂತ ಕೇಳಿದೆ. ಅವಳು ಹೋಟೆಲ್ ಏರ್ಪೋರ್ಟ್ ಒಳಗೆ ಇದೆ,ಏರ್ಪೋರ್ಟ್ ನ ಸಂಚಾರ ವ್ಯವಸ್ಥೆ (airport transit )ಉಪಯೋಗಿಸಿ ಅಂತ ಎಲ್ಲವನ್ನು ಹೇಳಿಕೊಟ್ಟಳು!! ಅವಳು ಹೇಳಿದಂತೆ ಹುಡುಕುತ್ತ ಹೊರಟಾಗ,ಅಲ್ಲಿ ಕೆಲಸ ಮಾಡುವ ಭಾರತೀಯ ನನ್ನ ಮುಖ ನೋಡಿ (ಚಿಂತಜನಕ ಮುಖ ?) ನನ್ನನ್ನು ಮಾತನಾಡಿಸಿ, ಸರಿಯಾದ ಮಾರ್ಗದರ್ಶನ ನೀಡಿದರು.ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ,ಪುಣ್ಯ ಬರಲಿ ಅಜ್ಜ ನಿನಗೆ ಎನ್ನುತ್ತಾ ಅವರು ಹೇಳಿದಂತೆ ನಡೆದಾಗ,ನನಗೆ ನೀಡಿದ ಹೋಟೆಲ್ ಕಂಡು ತುಂಬಾ ಖುಷಿಆಯಿತು. ಸಮಸ್ಯೆ ಮುಗಿದೇ ಹೋಯಿತು !! ನಾನು ಅಂದು ಕೊಂಡಂತೆ ಯಾವುದೇ ತರಹದ ತೊಂದರೆ ಆಗಲಿಲ್ಲ...ಸುಮ್ಮನೆ ಆತಂಕ ಪಟ್ಟೆನಲ್ಲ ಅಂದುಕೊಂಡು ಒಳಗೆ ನಡೆದೆ.ಹುಮ್ಮ್ ಈ ಸಮಸ್ಯೆ ಇಂದ ನನಗೆ ಆದ ಲಾಭ ಎಂದರೆ ೫ ಸ್ಟಾರ್ ಹೋಟೆಲ್ ನಲ್ಲಿ ಉಚಿತವಾಗಿ ನಿಲ್ಲುವ ಅವಕಾಶ!! ಎಷ್ಟು ಚೆನ್ನಾಗಿದೆ ಹೋಟೆಲ್ ಅಂತ ಖುಷಿ ಪಟ್ಟೆ.ಅಳುಕು ಬಿಟ್ಟು ಕೇಳುವುದರಲ್ಲಿ ಯಾವುದೇ ನಷ್ಟವಿಲ್ಲ,ಅನುಕೂಲವೇ ಆಗಿದೆ ಅಂತ ಅನುಭವದಿಂದ ತಿಳಿದುಕೊಂಡ ನಾನು, ಫ್ರಂಟ್ ಡೆಸ್ಕ್ ನಲ್ಲಿ ನಾನು ಇಲ್ಲಿಂದ ನನ್ನ ಗಂಡನಿಗೆ ಫೋನ್ ಮಾಡಲೇ? ನಾನು ಇಲ್ಲಿ ಉಳಿದುಕೊಳ್ಳುತ್ತಿರುವ ವಿಷಯ ಅವ್ರಿಗೆ ತಿಳಿಯದು ಎಂದು ಕೇಳಿದ ತಕ್ಷಣ ,ಖಂಡಿತ ಮಾಡಿ ಅಂತ ಫೋನ್ ಕೊಟ್ಟಳು!! ಅಜಿತ್ ಗೆ ವಿಷಯ ತಿಳಿಸಿದ ನಾನು, ನಾನು ನಿಜವಾಗಿ relaxed ಆಗಿದ್ದೇನೆ.ಮೊದಲ ಬಾರಿ ಯಾವುದೇ ರೀತಿಯ ಆತಂಕ ಕಾಡುತ್ತಿಲ್ಲ ಎಂದು ಹೇಳಿದೆ.ವಿಷಯ ಹೇಳಿ ಅಳುತ್ತೇನೆ ಅಂತ ನಿರೀಕ್ಷಿಸಿದ ಅವನಿಗೆ ಆಶ್ಚರ್ಯಆಗಿರಬೇಕು. ಯಾಕೆಂದರೆ ಸಣ್ಣ ಸಣ್ಣ ವಿಷಯಕ್ಕೂ ಅತಿ ಟೆನ್ಶನ್ ಮಾಡಿಕೊಳ್ಳೋ ಜನ ನಾನು, ಹೀಗೆಲ್ಲ ಆದರು ಆರಮಗಿದ್ದೇನೆ ಅಂದಿದ್ದು ನನಗೆ ಕೂಡ ಆಶ್ಚರ್ಯವೆ!!

ಅಂತು ಒಬ್ಬಳೇ ಡಿನ್ನರ್ ಗೆ ಕೂಡ ಹೋಗಿ,ಒಬ್ಬಳೇ ರೂಂ ನಲ್ಲಿ ಉಳಿದುಕೊಂಡು ಮಾರನೇ ದಿನದ ವಿಮಾನ ಹತ್ತಿ ನನ್ನ ಊರನ್ನು ಸೇರಿ,ಅಜಿತ್ ನ ನೋಡಿದಾಗ ನನ್ನ ಮೇಲೆ ನನಗೆ ಹೆಮ್ಮೆ ಅನಿಸಿತು.ನನ್ನ ಮಟ್ಟಿಗೆ ಅದು ದೊಡ್ಡ ಸಾಧನೆಯೇ.. ಈ ಸಾಧನೆಗೆ ವಿಜಯಕ್ಕೆ ೫ ಮೆಟ್ಟಿಲು ಪುಸ್ತಕದ ವಾಕ್ಯದ ಜೊತೆ ಗೆ ನನ್ನ ಅಣ್ಣ ನವರ ಬುದ್ದಿ ಮಾತುಗಳು ಕೂಡ ಕಾರಣ.ಅವರು ಕೂಡ ನನ್ನ ಸಣ್ಣ ಸಣ್ಣ ವಿಷಯಕ್ಕೆ ಆತಂಕ ಪಡುವ ಬುದ್ಧಿಗೆ ಅರ್ಥ ಇಲ್ಲ .. ನಿನಗೆ ನಿಜವಾದ ಸಮಸ್ಯೆಏನೆಂದು ಗೊತ್ತಿಲ್ಲ ಅಂತ ತಿಳಿಸಿಕೊಟ್ಟಿದ್ದರು. ಅವರಿಗಾದರೂ ನನ್ನ ಈ ಅನುಭವ,ಸಾಧನೆ(?) ಖುಷಿ ಕೊಡಬಹುದು ಹಾಗೂ ನನ್ನ ಹಾಗೆ ಮೊದಲ ಬಾರಿ ಒಬ್ಬರೇ ಪ್ರಯಾಣ ಮಾಡುವವರಿಗೆ ,ಈ ಸಮಸ್ಯೆ ಬಂದರೆ ನನ್ನ ಅನುಭವ ಉಪಯೋಗಕ್ಕೆ ಬಂದೀತು ಎಂದು ಬರೆದಿದ್ದೇನೆ.

Posted by Amritha at 10:59 AM 1 comments  

ನಮ್ಮ ನ್ಯೂಯಾರ್ಕ್ ಪಯಣ

Wednesday, October 21, 2009

ಚಿತ್ರಗಳಲ್ಲಿ ನೋಡಿರುವ .. ಕೇಳಿರುವ .. ನ್ಯೂಯಾರ್ಕ್ ನ ನೋಡಲು ಬಹಳ ಕಾತರ ದಿಂದ ಕಾದಿದ್ದೆ ... ಹಳ್ಳಿ ಇಂದ ದಿಲ್ಲಿಗೆ ಅನ್ನೋ ತರ , ಕಿನ್ಗಸ್ಪೋರ್ತ್ ಅನ್ನೋ ಅಮೇರಿಕಾದ ರೂರಲ್ ಏರಿಯದಿಂದ ನ್ಯೂಯಾರ್ಕ್ ಕಡೆ ನಾನು ,ಅಜಿತ್ ,ಮತ್ತೆ ಅಜಿತ್ ಮಿತ್ರರ ಫ್ಯಾಮಿಲಿ ಹೊರಟಿದ್ದೆವು.
ಏಪ್ರಿಲ್ 9th 09 ಅಂದು ಮಧ್ಯಾನ್ನ ಹೊರಟೆವು ... ದಾರಿ ಉದ್ದಕ್ಕೂ ವಿಶಾಲವಾದ ಜಾಗಾ.. ಮಧ್ಯೆದಲ್ಲಿ ದೊಡ್ಡ ಮನೆ ,ಅದರಲ್ಲಿ ಅವರದೇ ಆದ ಕುದುರೆ ,ದನಗಳು ... ಸೂರ್ಯಾಸ್ತ ಇವೆಲ್ಲ ನೋಡ್ತಾ ಖುಷಿಯಗ್ತಿದ್ರು .. ಒಳಗೆ ತುಂಬಾ emotional ಆಗಿಬಿಟ್ಟಿದ್ದೆ ... ನನ್ನ ಅಪ್ಪ ,ಅಮ್ಮ ,ಅಕ್ಕ ,ಅಣ್ಣ ,ದೊಡ್ಡಮ್ಮ ,ಅಣ್ಣಂದಿರ ಮಕ್ಳು ಇವರೆಲ್ಲ ನೆನಪಾದರು .. ಅವ್ರು ಇದನ್ನೆಲ್ಲಾ ನೋಡ್ಬೇಕು ಅಂತ ಅನ್ನಿಸ್ತು .. ಎಲ್ಲರನ್ನು ಕರ್ಕೊಂಡು ಬರೋಕೆ ಆಗೋಲ್ಲ .. atleast ಅತ್ತೆ ಅದ್ರು ಬರ್ತಿದ್ದಾರೆ ಅಂತ ಸಮಾಧಾನ ಮಾಡ್ಕೊಂಡೆ ... ಹಾಗೆ ನೋಡಿದ್ರೆ ಭಾರತದಲ್ಲೂ ತುಂಬಾ ಚೆನ್ನಾಗಿರೋ ಜಾಗಗಳಿವೆ .. ಆದರೆ ನೋಡ್ಲಿಕ್ಕೆ ,ಹೋಗಲಿಕ್ಕೆ ಸಮಯ ಇರಲಿಲ ಅಷ್ಟೇ ...

ಅಂತು ಅಮೆರಿಕದ ಹಳ್ಳಿಗಳು ಇಷ್ಟು ಚೆನ್ನಾಗಿವೆ ಹಾಗಿದ್ರೆ ನ್ಯೂಯಾರ್ಕ್ ಸೂಪರ್ ಅಂತ ಮನಸಲ್ಲೇ ಕುಣಿಯುತ್ತ ನ್ಯೂಯಾರ್ಕ್ ಕಡೆ ಹೋಗ್ತಿದ್ದೆ .... ನ್ಯೂಯಾರ್ಕ್ ಒಳಗೆ ಎಂಟರ್ ಆಗಿದ ಕೂಡ್ಲೇ .. ಮೊದಲ ಬಾರಿ ಮುಂಬೈಗೆ ಹೋದ ನೆನಪಾಯ್ತು !! ನಿಜ .. ಹಾಗೇ ಇತ್ತು .. ಟ್ರೈನ್ಸ್ ಗಲಾಟೆ .. ಇತರೆ ಕಾರ್ ಗಳು ಹಾರ್ನ್ ಮಾಡುತ್ತ ( ಟೆನ್ನೆಸ್ಸೆಯಲ್ಲಿ ಯಾವುದೇ ಕಾರಣಕ್ಕೂ ಹಾರ್ನ್ ಮಾಡೋ ಹಾಗಿಲ್ಲ ..ರೂಲ್ಸ್ , ಹಾಗೆ ಮಾಡಿದ್ರೆ ಎದುರಿನವರಿಗೆ ಸಿಟ್ಟು ಬರುತ್ತೆ )...ಸ್ಪೀಡ್ ಆಗಿ ಹೋಗೋದು ,ದೊಡ್ಡ ದೊಡ್ಡ ಬಿಲ್ದಿಂಗ್ಸ್ ನೋಡಿದಾಗ ಇದು ಖಂಡಿತ ಮುಂಬೈ ಅಂತ ಅಜಿತ್ ಗೆ ಹೇಳಿ "ಇದು NYC ತುಂಬಾ ಪೋಷ . .." ಅಂತ ಬೈಸಿಕೊಂಡೆ .. ಆದರು ತೆಪ್ಪಗೆ ಕೂತು ಮುಂಬೈಗೆ ಹೋದ ಫಸ್ಟ್ ಡೇ ನೆನಪು ಮಾಡ್ಕೊಂಡೆ . ಅಪ್ಪನಿಗೆ ಫೋನ್ ಮಾಡಿ ಅತ್ತಿದ್ದೆ .. "ಯಾಕೆ ಬಂದೆ ಈ ಸಿಟಿಗೆ .. ನನಗೆ ರೋಡ್ ಕ್ರಾಸ್ ಮಾಡೋಕು ಗೊತ್ತಿಲ್ಲ .. ಭಯ " ಅಂತ. .. ಕೊನೆಗೆ ಅದೇ ಸಿಟಿಯಲ್ಲಿ ಲೋಕಲ್ ಟ್ರೈನ್ ,ಬಸ್ ನಲ್ಲಿ ಒಬ್ಳೇ ಓಡಾಡೋ ಅಷ್ಟು ಧೈರ್ಯ ಬಂದಿತ್ತಲ್ಲ ಅಂತ ನಗು ಬಂತು .. ಅದಿಕ್ಕೆ ನ್ಯೂಯಾರ್ಕ್ ನಲ್ಲೂ ಓಡಾಡೋಕೆ ಕಲಿತೀನಿ ಅಂತ ಧೈರ್ಯ ಮಾಡ್ಕೊಂಡೆ .ಅವತ್ತು ರಾತ್ರಿ ತಲುಪಿ Days INN ಅನ್ನೋ ಹೋಟೆಲ್ ರೂಂ ಸೇರಿದೆವು.

ಮಾರನೇ ದಿನ ಎಂಪೈರ್ ಸ್ಟೇಟ್ ಬಿಲ್ಡಿಂಗ್ (102 floors ಎತ್ತರ ) ನೋಡೋಕೆ ಹೊರಟೆವು .. ಕಿಂಗ್ ಸ್ಪೋರ್ಟ್ ನಲ್ಲಿ ಡ್ರೈವ್ ಮಾಡಿರೋ ನಮಗೆ ನ್ಯೂಯಾರ್ಕ್ ನಲ್ಲಿ ಡ್ರೈವಿಂಗ್ ಮಾಡೋಕೆ ಸಾಧ್ಯನೇ ಇಲ್ಲ ಅಂತ .. ಕಾರನ್ನ ಹೋಟೆಲ್ ನಲ್ಲೆ ಪಾರ್ಕ್ ಮಾಡಿ .. Subway ನಲ್ಲೆ ಓಡಾಡೋದು ಅಂತ ಡಿಸೈಡ್ ಮಾಡಿದ್ದೆವು.. ಹಾಗಾಗಿ ಬೆಳಿಗ್ಗೆ ಸುಬ್ವಿ ಸ್ತೈಒನ್ ಹುಡ್ಕೊಂಡು ಹೋದೆವು.. ಮ್ಯಾಪ್ ಹಿಡ್ಕೊಂಡು ಓಡಾಡಿದೆವು. subway .. ಟ್ರೈನ್ .. ಅಂತ ಅನ್ಲಿಮಿಟೆಡ್ ಟ್ರಾವೆಲ್ ಡೇ ಪಾಸು ಮೆಟ್ರೋ ಕಾರ್ಡ್ ತೊಗೊಂಡು ,swipe ಮಾಡಿ ಒಳಗೆ ಹೋದ ನನಗೆ .. ಸ್ಟೇಷನ್ ನೋಡಿದ ಕೂಡ್ಲೇ ಖುಷಿ ಜರ್ರನೆ ಇಳಿಯಿತು ...!!! "ಇದು ನನ್ನ ಮುಂಬೈ RAILWAY STATION..!!!!!" ಅಂತ ಕಿರುಚಿದೆ .. ಥಳ ಥಳ ಹೊಳೆಯುವ ನೆಲ ..ಜಗ ಜಗನೆ ಹೊಳೆಯುವ ಲೈಟ್ಸ ಎಲ್ಲ expect ಮಾಡಿದ್ದ ನನಗೆ ಮುಂಬೈ ಸ್ಟೇಷನ್ ತರ ಇರೋ ,(ವಾಸನೆ ಕೂಡ ಬರ್ತಾ ಇತ್ತು !!! )ಸ್ಟೇಷನ್ ನೋಡಿ ನಿರಾಸೆ ಆಯಿತು .. ಆದರು ಟ್ರೈನ್ ನೋಡಿ ಖುಷಿ ಆಯಿತು ...ತುಂಬಾ ಚೆನ್ನಾಗಿತ್ತು ..


ಅಂತು subway ನಲ್ಲಿ ಓಡಾಡಿ ಓಡಾಡಿ ಅಭ್ಯಾಸ ಆಯಿತು .. ಮ್ಯಾಪ್ ನೋಡ್ಕೊಂಡು .. ತಪ್ಪು ಟ್ರೈನ್ ಹತ್ತಿ .. ಎಲ್ಲೊ ಇಳಿದು ,ಎಲ್ಲೊ ಹತ್ತಿ ಏನೇನೊ ಮಾಡಿ destination ತಲುಪ್ತ ..ನನಿಗೆ subway ಓಡಾಟನೆ ತುಂಬಾ ಇಷ್ಟ ಆಯಿತು ..ಯಾಕಂದ್ರೆ ಅಲ್ಲಿ ಸ್ವಲ್ಪ ಬೆಚ್ಚಗೆ ಇತ್ತು !!! ಹೌದು ..ನ್ಯೂಯಾರ್ಕ್ ನಲ್ಲಿ ಬೇಸಿಗೆಕಾಲದಲ್ಲಿ ಕೂಡ ಚಳಿಗಾಲಕ್ಕಿಂತ ಜೋರಾಗಿತ್ತು ಚಳಿ !!! ಟೆಂಪರೇಚರ್ ಜಾಸ್ತಿ ತೋರಿಸ್ತಿದ್ರು .. ಶೀತಗಾಳಿ ಬೀಸುತಿತ್ತು .... ನನಗಂತೂ ನ್ಯೂಯಾರ್ಕ್ ಸಹವಾಸ ಬೇಡ ಅಂತ ಅನ್ನಿಸ್ತು .. ಆದರು .. ಕಷ್ಟಪಟ್ಟು ಪ್ಲೇಸ್ ನೋಡ್ಬೇಕು ಅಂತ ಚಳಿಯಲ್ಲಿ ನಡಗುತ್ತಾ ಅಜಿತ್ ನ ಹಿಂದೆ ಹೋಗ್ತಿದ್ದೆ.

ಅಂತು ಎಂಪೈರ್ ಸ್ಟೇಟ್ ಬಿಲ್ಡಿಂಗ್ ಸಿಕ್ಕಿತು ... ನ್ಯೂಯಾರ್ಕ್ ಪಾಸು ಆನ್ಲೈನ್ ತೆಗೆದುಕೊಂಡಿದ್ದೇವೆ, ನಾವು ಒಳಗೆ ಬೇಗ ಹೋಗಬಹುದು ಅಂತ, ಒಳಗೆ ಕಾಲಿಟ್ಟರೆ,ದೊಡ್ಡ ಕ್ಯು !!..ಸೆಕ್ಯೂರಿಟಿ ಚೆಕ್ ಅಂತೆ !!! 2 ಘಂಟೆ ನಿಂತು, ಅಂತು -ಇಂತೂ ಸೆಕ್ಯೂರಿಟಿ ಚೆಕ್ ಮುಗ್ಸಿ ಟಿಕೆಟ್ ಕೌಂಟರ್ ಹತ್ರ ಬರ್ತಾ ಸುಸ್ತಾಗಿತ್ತು . ಆಮೇಲೆ ಪುನಃ ಕ್ಯು .. 86th floor ಗೆ ಹೋಗೋಕೆ ಲಿಫ್ಟ್ ಗೆ ಕಾಯಲಿಕ್ಕೆ !! 86th floor ನಿಂದ ವ್ಯೂ ನೋಡಿದಾಗ ಸುಸ್ತೆಲ್ಲ ಹೋಯ್ತು .. ತುಂಬಾ ಅದ್ಭುತವಾದ ನೋಟ !! (ಕೆಲವೊಮ್ಮೆ ಕನ್ನಡ ಶಬ್ದಗಳು ನೆನಪಾಗುತ್ತವೆ .. ಲೇಖಕಿ ಆಗೋ ಆಸೆ .. ಹಾಗಾಗಿ ಬರೀತಾ ಇದ್ದೀನಿ .. ನಗಬೇಡಿ )
ಆದರೆ ಫೋಟೋಗೆ ಮಾತ್ರ ಸರಿಯಾಗಿ ಪೋಸ್ ಕೊಡೋಕೆ ಆಗ್ಲಿಲ್ಲ .. ಅಷ್ಟು ಜೋರು ಗಾಳಿ,ಚಳಿ .. ಅಬ್ಬ .. ಬೇಗ ನೋಡೋದು .. olage ಬರೋದು .. ಪುನಃ ಹೋಗೋದು ಇದೆ ಮಾಡ್ತಾ ಇದ್ದೆ :)
ಸಂಜೆ ಆಗಿತ್ತು ಆದರೆ summer ಆದ್ದರಿಂದ ರಾತ್ರಿ 8 ರ ತನಕ ಬೆಳಕು ಇರುತ್ತೆ ... ಅದಿಕ್ಕೆ ಕಟ್ಟಲು ಆಗುವದು ಕಾಯ್ತಾ ಇದ್ವಿ .. ಕತ್ತಲ ನ್ಯೂಯಾರ್ಕ್ ನೋಟ ಕೂಡ ಬೇಕಿತ್ತು ನಮಗೆ.


ಎಂಪೈರ್ ಸ್ಟೇಟ್ ಬಿಲ್ಡಿಂಗ್ ನೋಡಿ ಕೆಳಗೆ ಬಂದ ನಾವು ,ಬೇರೆ ಏನು ಬೇಡ ಊಟ ಸಿಕ್ಕಿದ್ರೆ ಸಾಕು ಅಂತ ಇಂಡಿಯನ್ ರೆಸ್ಟೋರೆಂಟ್ ಹುಡುಕಲಿಕ್ಕೆ subway ಹತ್ತಿದೆವು .. ಬಿರ್ಯಾನಿ ಪ್ರಿಯ ನನ್ನ ಪತಿಗೆ ಚಳಿ ಆದ್ರು ಪರವಾಗಿಲ್ಲ ಬಿರ್ಯಾನಿ ಬೇಕು ಅಂತ ಹುಡುಕಿಕೊಂಡು ಹೋದೆವು . 10 ಸಲ ದಾರಿ ತಪ್ಪಿ ಹುಡುಕಿ ಮಾಡಿ ಕೊನೆಗೆ ನಾವು
ರೆಸ್ಟೋರೆಂಟ್ ತಲಪೋ ಹೊತ್ತಿಗೆ ಬಿರ್ಯಾನಿ ಮುಗ್ದೊಗಿತ್ತು ...ಅಜಿತ್ ಮುಖ ನೋಡಿದ ನನಗೆ ನಗು ತಡ್ಕೊಳಕ್ಕೆ ಆಗ್ಲಿಲ್ಲ .. ಹಹಹ

ಅಂತು ಸಿಕ್ಕಿದ್ದು ನುಂಗಿ ,ವಾಪಾಸು subway ಗೆ ಹೋಗಿ ರೂಂ ತಲುಪಿದೆವು .ತುಂಬಾ ಸುಸ್ತಾಗಿತ್ತು .. ಸಾಧಾರಣ 10 ಕಿಲೋಮೀಟರು ನಡಕೊಂಡು ಹೋಗಿದ್ದೆ ಅನ್ನಿಸುತ್ತೆ !! ಮಲಗಿದ ತಕ್ಷಣ ನಿದ್ದೆ ಬಂತು.

ಏಪ್ರಿಲ್ 11 09 ,ಶನಿವಾರ ಬೆಳಿಗ್ಗೆ ಬೇಗ ಎದ್ದು Statue of Liberty ನೋಡೋಣ ಅಂತ ಹೊರಟೆವು .. ತುಂಬಾ ಅಂದ್ರೆ ತುಂಬಾ ಚಳಿ .. ನ್ಯೂಯಾರ್ಕ್ ಗೆ ಬೆಂಕಿ ಬೀಳ ಅಂತ ಶಾಪ ಹಾಕ್ತ ..(ಯಾಕಂದ್ರೆ ಅವಗ್ಲಾದ್ರು ಸ್ವಲ್ಪ ಬಿಸಿ ಆಗಲಿ ಅಂತ !!! )Subway ಕಡೆ ಹೋದ್ವಿ ..ಬಹಳ ದೂರ ಇತ್ತು.ಟ್ರೈನ್ ನಲ್ಲಿ ಬೆಚ್ಚಗೆ ಕುರೋಕೆ ಸಿಗ್ತು. ನಮ್ಮ ಗ್ರಹಚಾರ ..ಹೋಗಿ ಇಳಿದ ತಕ್ಷಣ ಮಳೆ ,ಹನಿಯೋಕೆ ಅಲ್ಲ .. ಸುರಿಯೋಕೆ ಶುರು ಆಯಿತು !!! ಜೊತೆಗೆ ಗಾಳಿ ಬೇರೆ ..ಕೊಡೆ ಹಿಡ್ಕೊಂದ್ರೆ dish antenna ಆಗುತ್ತೆ .ಹಾಗಿತ್ತು .. ಪುನಃ ನಾವೆಲ್ಲ ಉಲ್ಟಾ ಹೋಗೋಕೆ ಟ್ರೈನ್ ಹತ್ತಿ .. Madam tussaud's museum ಗೆ ಹೋದೆವು ..ಗೊತ್ತಿರೋ, ಗೊತ್ತಿರದೇ ಇರೋ ಎಲ್ಲ ಜನರ wax model ಮುಂದೆ ನಿಂತು ಫೋಟೋ ತೊಗೊಂಡೆವು :) ಅಲ್ಲಿಂದ ಹೊರಗೆ ಬರ್ತಾ ಮಧ್ಯಾನ್ನ .. ಚಳಿಗೆ ಊಟ ಹುಡ್ಕೊಂಡು ಹೋಗೋದು ಬೇಡ ಇಲ್ಲೇ MacDonald's ದು ಬರ್ಗರ್ ಗಿರ್ಗೆರ್ ತಿಂದು ಹೊಟ್ಟೆ ತುಂಬಿಸೋಣ ಅಂದ್ರು .. ನನ್ ಮಾತು ಕೇಳದೆ ಚೈನೀಸ್ ಫುಡ್ ಅಂತ ಚೈನಾ ಟೌನ್ ಹುಡ್ಕೊಂಡು ಹೋದೆವು .. ಚೈನಾ ಟೌನ್ ಅಂದ ಕೂಡ್ಲೇ ನನಗೆ ಶಾಪಿಂಗ್ ಮಾಡಬಹುದು ಅಂತ ಖುಷಿ ಆಯಿತು ... ಆದ್ರೆ ಟ್ರೈನ್ ಇಂದ ಕೆಳಗೆ ಕಾಲು ಇಡೋಕು ಅಸಹ್ಯ . ಅಷ್ಟು ಗಲೀಜು ನೆಲ .. ಮಳೆ ನೀರು ..ಕಪ್ಪು ಕಪ್ಪು .. ಅಂಡರ್ ಗ್ರೌಂಡ್ ಅದರಿಂದ ರೋಡ್ ನೀರು ಕೆಳಗೆ ಇಲ್ಕೊಂಡು ಬಂದಿತ್ತೇನೋ ... ರೋಡ್ ಕೂಡ ಗಲೀಜು .. ಶಾಪಿಂಗ್ ಬೇಡ ಏನು ಬೇಡ ಅಂತ ಬೈಕೋತ ಅಂತು ಒಂದು
ರೆಸ್ಟೋರೆಂಟ್ ಹುಡ್ಕಿ ಊಟ ಮಾಡಿದೆವು ....ಚೈನಾ ಟೌನ್ ನಮ್ಮ ಮುಂಬೈ ಬಾಂದ್ರಾ,ಲಿಂಕಿಂಗ್ ರೋಡ್ ತರ ಇತ್ತು .. Indins ಬದ್ಲು ಚೈನೀಸ್ ಜಾಸ್ತಿ ಇದ್ರು ಅಷ್ಟೇ.



ಅಲ್ಲಿಂದ ಮಳೆಯಲ್ಲ್ಲಿ ನೆನೆಯುತ್ತ .. Acquarium ನೋಡೋಕೆ ಹೋದ್ವಿ ...ತುಂಬಾ ಚೆನ್ನಾಗಿತ್ತು ... ಕಲರ್ ಕಲರ್ ಮೀನುಗಳು .. ತುಂಬಾ ಇಷ್ಟ ಆಯಿತು ..
Aquarium ನೋಡಿ ವಾಪಾಸ್ ಬರುತ್ತಾ ,ಚಳಿಗೆ ಕಾಫಿ ಕುಡಿಯೋಕೆ ಅಂತ ಹೋಗಿ ಐಸ್ ಕ್ರೀಂ ಇಷ್ಟ ಆಗಿ ಐಸ್ ಕ್ರೀಂ ತೊಗೊಂಡೆ !!!


ಅಲ್ಲಿಂದ ಬ್ರೂಕ್ಲ್ಯನ್ ಬ್ರಿಡ್ಜ್ ನೋಡೋಕೆ ಹೋದೆವು .


ಆಮೇಲೆ ಮೈನ್ places ನ ಮರುದಿನಕ್ಕೆ ಇಟ್ಟು,ಟೈಮ್ ಸ್ಕ್ವೇರ್ ಸುತ್ತಿ ,ಊಟ ಮುಗಿಸಿ ರೂಂ ಸೇರಿದೆವು .

ಏಪ್ರಿಲ್ 12th,ರವಿವಾರ ಲಾಸ್ಟ್ ದಿನ .. ಪುನಃ statue of liberty ನೋಡೋಕೆ ಹೋದೆವು . 6 ಡಿಗ್ರಿ ಸೆಲ್ಸಿಅಸ್ ಟೆಂಪರೇಚರ್ ಅಂತ ರಿಪೋರ್ಟ್ ಹೇಳಿದ್ರು .. ಹಾಳಾದ ಗಾಳಿ ಫ್ರೀಜ್ ಮಾಡೋ ಹಾಗೇ ಇತ್ತು. 2 ಸ್ವೆಟರ್ ಮೇಲೆ ಜಾಕೆಟ್ ಹಾಕ್ಕೊಂಡಿದ್ದೆ .. ಆದ್ರು ಬೇಸಿಗೆ ಅಂತ ಶೂಸ್ ತೊಗೊಂಡು ಹೋಗಿರಲಿಲ್ಲ ..ನನ್ನ ಕಾಲು ಫ್ರೀಜ್ ಆಗ್ತಿತ್ತು ..

Ferry ಲಿ ಲಿಬರ್ಟಿ ಐಲ್ಯಾಂಡ್ ಹತ್ರ ಹೋಗ್ತಾ ಹೋಗ್ತಾ ನನಗೆ ಕನ್ಯಾಕುಮಾರಿಯ ವಿವೇಕಾನಂದ Statue ನೆನಪಾಯ್ತು ... ಹುಮಮ್ ಇಡೀ ಟ್ರಿಪ್ ಇಂಡಿಯಾ ,USA compare ಮಾಡೋ ಬದ್ಲು ಎಂಜಾಯ್ ಮಾಡು ಸ್ವಲ್ಪ ಅಂತ ಮತ್ತೊಮ್ಮೆ ಬೈಸ್ಕೊಂಡೆ :(

ಅಮ್ಮಾಯಾ ....ಚೂರು ಎಂಜಾಯ್ ಮಾಡೋಕೆ ಆಗ್ಲಿಲ್ಲ .... ತಲೆ ಎತ್ತಿ ನೋಡೋಕೆ ಕೂಡ ಆಗ್ತಿಲ್ಲ .. ಕೊರೆಯುವ ಚಳಿ ... ಗಾಳಿ ಎಷ್ಟು ಜೋರು ಅಂದ್ರೆ ಯಾರೋ ಹಿಂದೆ ನಿಂತು ದೂಡಿದ ಹಾಗೆ ಆಗ್ತಿತ್ತು .. ಮಧ್ಯೆಯಲ್ಲಿ ಅಜಿತ್ ಫೋಟೋ ಗೆ ನಿಲ್ಲು ಅಂತ !!ಹಲ್ಲು ಕಚ್ಚಿ ಚಳಿಲಿ ನಡುಗ್ತಿದ್ದ ನನಗೆ ಫೋಟೋಗೆ ಹಲ್ಲು ಬಿಡೋಕೆ ಆಗುತ್ತ ??!! ಅಂತು ಇಂತೂ ಧೈರ್ಯ ಮಾಡಿ ಒಂದು without ಟೊಪ್ಪಿ ಫೋಟೋಗೆ ಪೋಸ್ ಕೊಟ್ಟೆ . ಫೋಟೋ ತೆಗಿಯೋಕೆ ಹೋದ್ರೆ ಕೈ ಫ್ರೀಜ್ ಅಗಿತ್ದೆ ಅಂತ ಅಜಿತ್ ಫೋಟೋ ತೆಗಿಯೋದು ಕಮ್ಮಿ ಮಾಡಿದ.. ಅಬ್ಬ ಬದುಕಿದೆ !!
ಪುನಃ 1 ಘಂಟೆ ಸೆಕ್ಯೂರಿಟಿ ಚೆಕ್ ಗೆ ಕ್ಯು ನಲ್ಲಿ ನಿಂತೆವು . statue pedestal ಗೆ ಹೋಗೋಕೆ ದಿನದಲ್ಲಿ ಸ್ವಲ್ಪ ಜನರಿಗೆ ಮಾತ್ರ ಚಾನ್ಸ್ ಸಿಗುವುದು ಅಂತೆ .. ನಮಗೆ ಸಿಕ್ಕಿತು ... 156 ಮೆಟ್ಟಿಲು ಹತ್ಕೊಂಡು ಕಾಲ ಬುಡಕ್ಕೆ ಹೋದ್ವಿ ... ತುಂಬಾ ಚೆನ್ನಾಗಿತ್ತು ... :) Statue ಕ್ರೌನ್ ಹತ್ರ ಹೋಗಲಿಕ್ಕೆ ಮೆಟ್ಟಿಲುಗಳಿವೆ. ಆದ್ರೆ ವಿಸಿಟರ್ಸ್ ಗೆ ಬಿಡೋಲ್ಲ ... ಏನು ಅದ್ಭುತವಾದ ಪ್ಲಾನ್ನಿಂಗ್ ಅಂತ ಆಶ್ಚರ್ಯ ಪಟ್ಟೆ.
ಕೆಳಗೆ ಬಂದು ಅಲ್ಲೇ ಊಟ ಮಾಡಿ Ferry ಗಾಗಿ ಕಾದು ನಿಂತಾಗ ನಾನು ಚಳಿಗೆ ಅಮೆರಿಕನ್ ಆಗಿಬಿಟ್ಟಿದ್ದೆ (ಗಲ್ಲ ,ಮುಗೂ ಕೆಂಪು ಆಗಿತ್ತು !!! )


ಅಲ್ಲಿಂದ Zoo ನೋಡಿದೆವು . ಇಲ್ಲಿ ತನಕ ನಾನು ಹುಲಿಗಳನ್ನ ಫ್ರೀ ಆಗಿ ಬಿಟ್ಟಿರೋ zoo ನೋಡಿರಲಿಲ್ಲ (ofcourse ನಮ್ಮ ಮಧ್ಯೆ ಗ್ಲಾಸ್ ಇತ್ತು !! ) ಎಷ್ಟು ಚೆನ್ನಾಗಿ yella maintain ಮಾಡಿದ್ದಾರೆ ಅಂತ ಖುಷಿ ಆಯಿತು. ಗೊರಿಲ್ಲ ಒಂದು ಜನ ಬಂದ ತಕ್ಷಣ ಫೋಟೋಗೆ ಬೇರೆ ಬೇರೆ ತರ ಪೋಸ್ ಕೊಡ್ತಿತ್ತು !! ಎಷ್ಟು ಬುದ್ಧಿ ಅದಿಕ್ಕೆ !!! ಎಷ್ಟು ನಖರ ಅಮ್ಡ್ತಿತ್ತು !! ತುಂಬಾ ನಗು ಬಂದಿತು ... ಹಾಗೇ.. ಅಕ್ಕನ ಮಗಳು ಅನಿಶ ,ಅಣ್ಣನ ಮಕ್ಕಳು ಎಲ್ಲ ನೆನಪಾದರು .. ಅವರೆಲ್ಲ ಇದು ಆಡೋದು ನೋಡಿ ಎಷ್ಟು ಎಂಜಾಯ್ ಮಾಡ್ತಿದ್ರು ಅಂತ ಅನ್ನಿಸ್ತು ..

ಹುಮಮ್ ಅಲ್ಲಿಗೆ ನನ್ನ ನ್ಯೂಯಾರ್ಕ್ ಟ್ರಿಪ್ ಮುಗಿಯಿತು .. ಇನ್ನು 2 ಜಾಗಗಳು ನೋಡೋಕೆ ಇದ್ರೂ ,ಹೋಗೋಕೆ ನನಗೆ ಆಸಕ್ತಿ ಇರಲಿಲ್ಲ .. ಚಳಿಗೆ ಬೇಸತ್ತು ಹೋಗಿದ್ದೆ .. ನಾನು , ಅಜಿತ್ ರೂಂಗೆ ಬಂದೆವು ..ನಮ್ಮ ಜೊತೆಗೆ ಬಂದ ಫ್ರೆಂಡ್ಸ್ ಟೈಮ್ ಸ್ಕ್ವೇರ್ ಗೆ ಹೋದರು .

ಸೋಮವಾರ ಬೆಳಿಗ್ಗೆ ಕಾರ್ ನಲ್ಲಿ ಪುನಃ ಕಿಂಗ್ ಸ್ಪೋರ್ಟ್ ಕಡೆ ಹೊರಟೆವು .. ದಾರಿಯಲ್ಲಿ ನ್ಯೂ ಜೆರ್ಸಿ ಅಲ್ಲಿ ಸರವಣ ಭವನ್ ಗೆ ಹೋಗಿ ಮಸಾಲ ದೋಸ ,ಚೋಲೆ ಬತುರ , ಉದ್ದಿನ ವಡೆ ತಿಂದೆವು :) ಅಲ್ಲಿಯ ಇಂಡಿಯನ್ ಸ್ಟೋರ್ ಹುಡುಕಿ ಹೋದಾಗ ದಾರಿ ಉದ್ದಕ್ಕೂ ಬರಿ ಇಂಡಿಯಾನ್ಸ್ ಕಾಣಿಸ್ತಾ ಇದ್ದರು. ಅಂಗಡಿಗಳೆಲ್ಲ ಇಂಡಿಯನ್ ಹೆಸರಿನವೇ !!! ನಾವು ಹೋದ ಸಬ್ಜಿ ಮಂಡಿ ಅಂತು ತುಂಬಾ ದೊಡ್ಡದು ... ಕಿಂಗ್ ಸ್ಪೋರ್ಟ್ ನಲ್ಲಿ ಜಾಸ್ತಿ
ಇಂಡಿಯಾನ್ಸ್ ಇಲ್ಲ ಅದಿಕ್ಕೆ ಸಣ್ಣ ಅಂಗಡಿ ಇರೋದು .. ಬೇಕಾದ ಸಾಮಾನು ತೊಗೊಂಡು ಅಲ್ಲಿಂದ ಮಧ್ಯಾನ್ನ ಹೊರಟೆವು ..ದಾರಿ ಉದ್ದಕ್ಕೆ ಕಿಂಗ್ ಸ್ಪೋರ್ಟ್ ನ ಹೊಗಳ್ತಾ ಬಂದೆ ...ಕಿಂಗ್ ಸ್ಪೋರ್ಟ್ ನನ್ನ ಹೆಬ್ರಿ ತರ ನೆಮ್ಮದಿ ಕೊಡುತ್ತೆ ಅಂತ ಹೇಳಿ .." ಈ ಜನ್ಮದಲ್ಲಿ ನೀನು compare ಮಾಡೋದು ಬಿಡೋಲ್ಲ .. ನಿನ್ನ ಹೆಬ್ರಿ ನ ಯಾವತ್ತು ಬಿಟ್ಟು ಕೊಡಲ್ಲ " ಅಂತ ಅಜಿತ್ ಹತ್ರ ಬೈಸಿಕೊಂಡರು ನನಗೆ ಬೇಜಾರಗಿಲ್ಲ .... ಯಾರು ಏನೆ ಹೇಳಿದ್ರು .. ಹೆಬ್ರಿ ಇಸ್ ದಿ ಗ್ರೇಟ್ ಪ್ಲೇಸ್ ಟು ಲಿವ್ :) ಹಹಹಹ ....





Posted by Amritha at 10:34 AM 4 comments  

ಯಾಕೆ ಈ ಬರೀತಾ ಇದ್ದೀನಿ ?

Sunday, August 2, 2009

ನಾವು ಒಂದು ೫ ಜನ ಫ್ರೆಂಡ್ಸ್ ಟೈಮ್ ಪಾಸ್ ಮಾಡ್ಲಿಕ್ಕೆ, ಯಾವ್ದಾದ್ರು ಟಾಪಿಕ್ ಮೇಲೆ ಈ- ಮೇಲ್ ಮಾಡಿ ಹರಟುತ್ತಿದೆವು.ಅವರೆಲ್ಲ ಅಮ್ಮಿ ನೀನು ಬರಿಯೋದು ನೋಡಿದರೆ, ಕಥೆ ಕೂಡ ಬರಿಬಹುದು ಅಂತ ಅಟ್ಟಕ್ಕೆ ಹತ್ತಿಸ್ತಿದ್ರು.. ಫ್ರೆಂಡ್ಸ್ ಅಲ್ವಾ.. ಹೇಳ್ದೆ ಇನ್ನೇನು ಮಾಡ್ತಾರೆ :) ಅಲ್ಲದೆ ಚಿಕ್ಕಂದಿನಿಂದಲೂ ಕಥೆ ಬರಿ ಬೇಕು ಅನ್ನೋ ಆಸೆ,ಅದಿಕ್ಕೆ ನೋಡೇ ಬಿಡೋಣ.. ಅಂತ ಶುರು ಮಾಡಿದ್ದೀನಿ.. ಹೇಗಿದ್ರು ಪುಕ್ಕಟೆ ಹೊಗಳೋಕೆ ಫ್ರೆಂಡ್ಸ್ ಇದ್ದರಲ್ಲಾ. ಅವರಿಗೂ ಟೈಮ್ ಪಾಸು ಆಗುತ್ತದೆ.ಅದಿಕ್ಕೆ ಅದೇ ಹೆಸರು !!!

ನನ್ನ ಅಣ್ಣ ಒಬ್ಬರು ಕೂಡ ತುಂಬ ಪ್ರೋತ್ಸಾಹ ನೀಡಿದ್ದಾರೆ ಅವರಿಗೂ,ನನ್ನ ಗೆಳತಿಯರಿಗೂ ಮತ್ತು ನನ್ನ ಪತಿ ಅಜಿತ್ ಗೆ ಧನ್ಯವಾದಗಳು.

Posted by Amritha at 10:01 PM 4 comments  

Subscribe to: Comments (Atom)

Blog Design by Gisele Jaquenod